ಚಕ್ರವಾಕ (ರಾಗ) ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನಾರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತೋಜವೇಗವಾಹಿನಿ ಎಂದು ಹೆಸರಿಸಿದ್ದಾರೆ. ಇದು ಹಿಂದೂಸ್ತಾನಿ ಸಂಗೀತ ಪದ್ಧತಿಯ ಅಹಿರ್ ಭೈರವ್ ರಾಗಕ್ಕೆ ಸಮೀಪವಾಗಿದೆ.ಈ ರಾಗ ಕೇಳುಗರಲ್ಲಿ ಭಕ್ತಿ ಮತ್ತು ಸಹಾನುಭೂತಿ ಮೂಡಿಸುತ್ತದೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ತೃತೀಯ "ಅಗ್ನಿ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೨ ಸ' ಅವರೋಹಣ ಸ' ನಿ೨ ದ೨ ಪ ಮ೧ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಬಿಂದುಮಾಲಿನಿ, ಕಲಾವತಿ (ರಾಗ), ಮಲಯಮಾರುತ,ವಾಲಜಿ ಮುಂತಾದವುಗಳು. ಇದರಲ್ಲಿ ಮಲಯಮಾರುತ,ವಾಲಜಿ ಹೆಚ್ಚು ಜನಪ್ರಿಯವಾಗಿದೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ()